ಫೋಟೋಗ್ರಾಫಿಗೆ ಫೋಕಸ್‌ರಾಘವೇಂದ್ರ.


ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಅತ್ಯಗತ್ಯ. ಸಾಧಿಸುವುದು ಕೇವಲ ಮಾತಾಗದೇ ಅದನ್ನು ಸರಿಯಾದ ರೀತಿಯಲ್ಲಿ ಅನುಸರಿಸಿಕೊಂಡು ಹೋಗಬೇಕೆನ್ನುವುದಕ್ಕೆ ರಾಘವೇಂದ್ರ ಅವರೇ ಮಾದರಿ.

ಮೂಲತಃ ಉಡುಪಿಯ ಕೊಡಂಗಳ್‌ನವರಾದ ಇವರು ನಾರಾಯಣ ನಾಯ್ಕ್ ಹಾಗೂ ರತ್ನವತಿ ಅವರ ಪುತ್ರ. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ನೆಹರು ಹೈಸ್ಕೂಲ್ ಅಲೆವೂರು ಎಂಬಲ್ಲಿ ಮುಗಿಸಿದರೆ, ಪಿಯುಸಿ ವಾಣಿಜ್ಯ ವಿಭಾಗ ಹಾಗೂ ಬಿ.ಕಾಂ ಪದವಿ ಶಿಕ್ಷಣವನ್ನು ಉಡುಪಿಯ ಗವರ್ನಮೆಂಟ್ ಕಾಲೇಜಿನಲ್ಲಿ ಪೂರೈಸಿದರು. ಎಂದು ನೆನೆದುಕೊಂಡು ತಮ್ಮ ಸವಿ ನೆನಪುಗಳನ್ನು ಬಿಚ್ಚಿಟ್ಟರು.
ಬಾಲ್ಯದ ದಿನಗಳಲ್ಲಿ ಓದಲು ಮನಸಿದ್ದರೂ, ಕಾಲೇಜು ಮೆಟ್ಟಲು ಏರದ ಪರಿಸ್ಥಿತಿ. ಮನೆಯಲ್ಲಿ ಅಕ್ಕ ಬಿಡಿ Pಟ್ಟಿದರಿಂದ ಎಸ್. ಎಸ್.ಎಲ್.ಸಿ ಮಾಡಿ ತದನಂತರ ಇವರು ಬಿಡುವಿನ ಸಮಯದಲ್ಲಿ ಕ್ಯಾಟರಿಂಗ್ ಕೆಲಸ ಮಾಡಿ ತಾನು ದುಡಿದ ಹಣದಿಂದ ಪದವಿ ಪೂರೈಸಿದರು. ಕಾಲೇಜು ಮುಗಿದ ತಕ್ಷಣ ಸಣ್ಣ ಪುಟ್ಟ ಕೆಲಸ ಮಾಡಿ ನಂತರ ಹಂತ ಹಂತವಾಗಿ ಛಾಯಾಗ್ರಹಣ ಇವರ ಜೀವನದಲ್ಲಿ ಬದಲಾವಣೆ ತಂದಿತು. ಪೋಟೋಗ್ರಾಫಿ ಕ್ಷೇತ್ರದಲ್ಲಿ ತಾನೂ ಹೆಸರು ಮಾಡುತ್ತೇನೆ ಎಂಬ ಅರಿವು ಕೂಡ ಅವರಲ್ಲಿ ಮೂಡಿರಲಿಲ್ಲ. ಕಾಲೇಜು ಆರಂಭದ ದಿನಗಳಲ್ಲಿಯೇ ಇವರಿಗೆ ಛಾಯಾಗ್ರಹಣ ಮೇಲೆ ಅಪಾರ ಒಲವು ಮೂಡಿತು ನಂತರ ಇವರಲ್ಲಿ ಯೋಚನೆ ಮತ್ತು ಆಸಕ್ತಿ ಪರಿಸರ ಮತ್ತು ಪ್ರಾಣಿ-ಪಾಕ್ಷಿಗಳ ಮೇಲೆ ಪೋಟೋಗ್ರಾಫಿ ಮಾಡಬೇಕು ಎಂಬ ಆಲೋಚನೆ ಮನಸ್ಸಿನಲ್ಲಿ ಮೂಡಿತು.
ತನ್ನ ಸ್ವಂತ ಸ್ಟೋಡಿಯೊ ಫೋಕಸ್ ಆvದ್ದರಿಂದ ಜನರು ಫೋಕಸ್ ರಾಘು ಎಂದೇ ಗುರುತಿಸುತಿದ್ದರು. ನನ್ನ ಕೈ ಹಿಡಿದ ಫೋಟೋಗ್ರಫಿ ವಿಶ್ವದಾದ್ಯಂತ ಹೆಸರು ಮಾಡಲು ಸಹಕಾರಿಯಾಯಿತು. ಇವರ ೨೦ ವರ್ಷಗಳ ಛಾಯಾಗ್ರಹಣದ ಪಯಣ ನೆನಪಿನ ಬುಟ್ಟಿಯನ್ನು ಒಂದೊAದೆ ರೀತಿಯಲ್ಲಿ ಬಿಚ್ಚಿಡುತ್ತಾರೆ.
ರಾಘವೇಂದ್ರ ಇವರಿಗೆ ಪಿಕ್ಟೋರಿಯಾಲ್, ವನ್ಯಜೀವಿ, ಹವ್ಯಾಸವಾದರೆ ಟ್ರಾವೆಲ್, ಮತ್ತು ಸ್ಟಿçಟ್ ಛಾಯಾಗ್ರಹಣ ಇವರ ಇನ್ನೊಂದು ಆಸಕ್ತಿಕರ ವಿಷಯವಾಗಿದೆ. ತನ್ನ ಪಯಣದ ಸಂದರ್ಭದಲ್ಲಿ ಫೋಟೋಗ್ರಾಫಿಯಲ್ಲಿ ನಿರತರಾಗಿದ್ದರು. ಸಿನೆಮಾಗಳಲ್ಲೂ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಇವರ ತಾಯಿ, ಪತ್ನಿ ಮತ್ತು ಗುರುಗಳಾದ ತೋಮಸ್ ಇವರೆಲ್ಲರ ಪ್ರೋತ್ಸಾº ಫೋಟೋಗ್ರಾಫಿಯಲ್ಲಿ ಯಶಸ್ಸು ಕಾಣಲು ಸಾಧ್ಯವಾಯಿತು.
ಇವರಿಗೆ ೧೫ಕ್ಕೂ ಅಧಿಕ ಅಂತಾರಾಷ್ಟ್ರೀಯ ಹಾಗೂ ೫೦ ಕ್ಕೂ ಅಧಿಕ ರಾಷ್ಟ್ರೀಯ , ರಾಜ್ಯಮಟ್ಟ ಪ್ರಶಸ್ತಿಗಳು ಲಭಿಸಿವೆ ಮತ್ತು ಪ್ರಾನ್ಸ್ ಪ್ರತಿಷ್ಠಿತ ಅಂತರಾಷ್ಟಿಯ ಎಎಫ್‌ಐಎಪಿ ಕಡೆಯಿಂದ ಡಿಸ್ಟಿಂಕ್ಷನ್ ಗೌರವ ಇವರ ವೃತಿ ಜೀವನದ ಅತೀ ದೊಡ್ಡ ಗೌರವ. ಕರ್ನಾಟಕದ ನಿಕೋನ್ ಸಂಸ್ಥೆಗೆ “ಆಗಿ ನೇಮಕಗೊಂಡರು. ೧೦ ವರ್ಷದ ಹಿಂದೆ ಮೊದಲ ಆವಾರ್ಡ್ ವೆಡಿಂಗ್ ಪೋಟೋಗ್ರಾಫಿಗೆ ಲಭಿಸಿದೆ.
ವೆಡಿಂಗ್ ಪೋಟೋಗ್ರಾಫಿಯಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಎಂಬ ಆಸೆಯ ಜತೆಗೆ ಎಷ್ಟೇ ಕಷ್ಟಕಾರವಾಗಿ ಇದರು ಕೂಡ ಛಾಯಾಗ್ರಾಹಣದಲ್ಲಿ ಮಾಸ್ಟರ್ “ಎಂಎಫ್ಫೇ”ಯಲ್ಲಿ ಸಾಧನೆಯನ್ನ ಮಾಡಿ ತನ್ನದೆ ಆದ ಛಾಪುನ್ನ ಮೂಡಿಸಲ್ಲಿದ್ದಾರೆ.
ಸ್ಪೂರ್ತಿ ನುಡಿ:
ಯುವಪೀಳಿಗೆಯಲ್ಲಿ ಸಾಧನೆ ಫೊಟೋಗ್ರಾಫಿ ಮಾಡಬೇಕೆಂಬ ಇಚ್ಚೆ ಇದ್ದೇ ಇರುತ್ತದೆ. ತಾನೂ ಬೆಳೆಯುವುದರ ಜತೆಗೆ ಇತರರನ್ನೂ ಅನುಕರಿಸಬೇಕು ಆಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಫೋಟೋಗ್ರಾಫಿನಲ್ಲಿ ಕಲಿಕೆ ಅನ್ನೋದು ನಿರಂತರ ಅದನ್ನು ಅಭ್ಯಾಸ ಮಾಡಿದರೆ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಾಧ್ಯ ಎನ್ನುತ್ತಾರೆ ಫೋಕಸ್‌ರಾಘು.

-ಕಾವ್ಯ , ಗಾಂಧಿನಗರ.

Leave a Comment

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s